ಎಲ್ಲಾ ಕೊಳಕು ಮನಸ್ಥಿತಿಯ ಪುರುಚರನ್ನು ಜೈಲಿಗೆ ಹಾಕಿ. ಪುರುಷರು ಯಾವಾಗ ಹೇಗೆ ಬದಲಾಗುತ್ತಾನೋ ಗೊತ್ತಾಗುವುದಿಲ್ಲ.ಯಾವಗ ಕೊಲೆ ಮಾಡ್ತಾರೋ? ಯಾವಾಗ ಅತ್ಯಾಚಾರ ಮಾಡ್ತಾರೋ? ಗೊತ್ತಿಲ್ಲ ಆದ್ದರಿಂದ ಎಲ್ಲಾ ಗಂಡಸರನ್ನು ಜೈಲಿಗೆ ಹಾಕುವುದಕ್ಕೆ ಸಾದ್ಯವೇ ಎಂದು ನಟಿ ರಮ್ಯಾ ತಮ್ಮ ಇನ್ಸ್ಟಾಗಾಂ ಖಾತೆಯಲ್ಲಿ ಪೋಸ್ಟೊಂದನ್ನು ಹೆಂಚಿಕೊಳ್ಳುವುದರ ಮೂಲಕ ಪ್ರಶ್ನಿಸಿದ್ದಾರೆ.

ಬೀದಿ ನಾಯಿಗಳ ಕಡಿತದಿಂದ ಉಂಟಾಗುವ ಸಾವು-ನೋವುಗಳಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ಸುಪ್ರೀಂಕೋರ್ಟ್ ಪೀಠವು, ನಾಯಿಗಳ ವರ್ತನೆಯ ಬಗ್ಗೆ ಒಂದು ಮಾರ್ಮಿಕ ಅಭಿಪ್ರಾಯ ವ್ಯಕ್ತಪಡಿಸಿತು.

ನಾಯಿಗಳ ಮನಸ್ಥಿತಿಯನ್ನು ಅಥವಾ ಅವು ಯಾವಾಗ ಆಕ್ರಮಣಕಾರಿಯಾಗಿ ವರ್ತಿಸುತ್ತವೆ ಎಂಬುದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಅಸಾಧ್ಯ” ಎಂದು ಅಭಿಪ್ರಾಯಪಟ್ಟಿತು. ಅಂದರೆ, ಪ್ರಾಣಿಗಳ ವರ್ತನೆಯನ್ನು ಮುನ್ಸೂಚಿಸುವುದು ಕಷ್ಟ ಎಂಬುದು ನ್ಯಾಯಾಲಯದ ಆಶಯವಾಗಿತ್ತು.

“ನಾಯಿಗಳ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅವುಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾದರೆ ಅಥವಾ ಅವುಗಳನ್ನು ಅಪಾಯಕಾರಿ ಎಂದು ಪರಿಗಣಿಸುವುದಾದರೆ, ಪುರುಷರ ಮನಸ್ಥಿತಿಯನ್ನು ಕೂಡ ಅರ್ಥಮಾಡಿಕೊಳ್ಳುವುದು ಕಷ್ಟವಲ್ಲವೇ? ಹಾಗಿದ್ದಲ್ಲಿ, ಪುರುಷರ ಮನಸ್ಥಿತಿ ಅರ್ಥವಾಗುವುದಿಲ್ಲ ಎಂಬ ಕಾರಣಕ್ಕೆ ಎಲ್ಲ ಪುರುಷರನ್ನು ಜೈಲಿಗೆ ಹಾಕಲು ಸಾಧ್ಯವೇ?” ಎಂದು ಪ್ರಶ್ನಿಸಿವುದರ ಮೂಲಕ ಸುಪ್ರೀಂ ಕೋರ್ಟಿನ ಅಭಿಪ್ರಾಯವನ್ನು ಟೀಕಿಸಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *