ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಖ್ಯಾತಿಯನ್ನು ಪಡೆದುಕೊಂಡಿರುವ ಚಾಲೆಂಜಿಂಗ್ ಸ್ಟಾರ್ ನಟನೆಯ ಡೆವಿಲ್ ಸಿನಿಮಾ ರಿಲೀಸ್ ಆಗಿ ಅದ್ದೂರಿ ಪ್ರದರ್ಶನವನ್ನೂ ನೀಡುತ್ತಿದೆ. ನಟ ದರ್ಶನ್ ಜೈಲಿನಲ್ಲಿದ್ದರೂ ಸಿನಿಮಾವನ್ನು ಗೆಲ್ಲಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.ಆದ್ರೆ ಎಲ್ಲಾ ಸಿನಿಮಾಗಳಿಗೆ ಪೈರಸಿ ಕಾಟ ಡೆವಿಲ್ ಸಿನಿಮಾಗೂ ಕಾಡದೆ ಬಿಟ್ಟಿಲ್ಲ.

ಯಾವ ನಟ-ನಟಿಯರ ಸಿನಿಮಾ ಬಿಡುಗಡೆಯಾದರೂ ಬಹುಬೇಗ ಪೈರಸಿ ವೈರಸ್ ಅಟ್ಯಾಕ್ ಮಾಡುತ್ತಿತ್ತು.ಒಂದು ಸಿನಿಮಾ ಮಾಡಲು ಚಿತ್ರತಂಡ ಎಷ್ಟು ಶ್ರಮ ಪಟ್ಟಿರುತ್ತದೆ ಎಂದು ಅವರಿಗೆ ಮಾತ್ರ ತಿಳಿದಿರುತ್ತದೆ. ಈಗಾಗಲೇ ಡೆವಿಲ್ ಸಿನಿಮಾದ 10.500ಕ್ಕೂ ಹೆಚ್ಚು ಪೈರಸಿ ಲಿಂಕ್‌ಗಳನ್ನು ಡಿಲೀಟ್ ಮಾಡಲಾಗಿದ್ದು, ದಯವಿಟ್ಟು ಸಿನಿಮಾವನ್ನು ಥಿಯೇಟರಿನಲ್ಲಿ ನೋಡಿ ಎಂದು ಡೆವಿಲ್ ಚಿತ್ರತಂಡ ಪೋಸ್ಟೊಂದನ್ನು ಹಂಚಿಕೊಂಡಿದೆ ಎನ್ನಲಾಗಿದೆ.

ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಈ ಸಿನಿಮಾಗೆ ಇಷ್ಟು ದೊಡ್ಡ ಮಟ್ಟಿಗೆ ಪೈರಸಿ ಕಾಟ ಎದುರಾಗಿಲ್ಲ. ದಯವಿಟ್ಟು ಸಿನಿಮಾವನ್ನು ಪೈರಸಿ ಮಾಡಬೇಡಿ ಎಂದು ಚಿತ್ರತಂಡ ಮನವಿಯನ್ನು ಮಾಡಿಕೊಂಡಿದೆ.

ಡೆವಿಲ್ ಬಿಡುಗಡೆಯಾದ ನಂತರ ಮೊದಲ ನಾಲ್ಕು ದಿನಗಳಲ್ಲಿ ಕೋಟಿ ರೂಗಳ ಲೆಕ್ಕದಲ್ಲಿ ಕಲೆಕ್ಷನ್ ಮಾಡಿತ್ತು. ಆದರೆ 5ನೇ ದಿನದಿಂದ ಬಾಕ್ಸ್ ಆಫೀಸ್ ಕಲೆಕ್ಷನ್ ಕುಸಿದಿತ್ತು.ನಂತರ 11 ನೇ ದಿನ ಏರಿಕೆಯನ್ನು ಕಂಡಿತು. ಹೀಗೆ ಪೈರಸಿ ಕಾಟದಿಂದ ಏರಿಳಿತ ಉಂಟಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

