ಬೆಂಗಳೂರು:ನಮ್ಮ ಬೆಂಗಳೂರಿನ ಬಗ್ಗೆ ಟ್ವೀಟ್ ಮಾಡಿದ ಯುವತಿ ಪೋಸ್ಟ್ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳು ಶುರುವಾಗಿವೆ .
ಬೆಂಗಳೂರಿಗೆ ಆಶ್ರಯ ಅರಸಿ ಬಂದವರು ಉದ್ಯೋಗ, ಶಿಕ್ಷಣ ಪಡೆದುಕೊಂಡು ಸೆಟಲ್ ಆಗಿ ತಮ್ಮ ತವರೂರಿಗೆ ಮರಳುವುದು ಸಹಜ.ಬೆಂಗಳೂರಿಗೆ ಪ್ರತಿದಿನವೂ ಸಾವಿರಾರು ಮಂದಿ ಬರ್ತಾರೆ ಹೋಗ್ತಾರೆಅದು ದೊಡ್ಡ ವಿಷಯವಲ್ಲ ಕೆಲವರು ತಮ್ಮ ತವರಿಗೆ ವಾಪಸ್ ಹೋಗುವಾಗ ಸಕಾರಾತ್ಮಕವಾದ ಭಾವನೆಗಳನ್ನು ಹಂಚಿಕೊಂಡರೆ, ಮತ್ತೆ ಕೆಲವರು ಬೆಂಗಲೂರಿನ ಬಗ್ಗೆ ನಕಾರಾತ್ಮಕ ಅಂಶಗಳನ್ನು ಪೋಸ್ಟ್ ಮಾಡುವುದರ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗ್ತಿದಾರೆ.

ಐಟಿ ಉದ್ಯೋಗಿ ಶ್ರೇಯಾ ಎನ್ನುವವರು 2025ನೇ ವರ್ಷದಲ್ಲಿ ಬೆಂಗಲೂರಿನಿಂದ ಹೋರಹೋಗುವ ನಿರ್ಧಾರ ಮಾಡಿರುವುದು ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರವಾಗಿದೆ. ಇನ್ನು ಮುಂದೆ ರೋಡುಗಳಲ್ಲಿ ಗುಂಡಿಗಳಿರುವುದಿಲ್ಲ.ಪ್ರಯಾಣದ ಸಮಯ ಹೆಚ್ಚಾಗಿರುವುದಿಲ್ಲ.ಕ್ಯಾಬ್ ಬುಕ್ಕಿಂಗ್ ಮಾಡಲು ಹೆಚ್ಚು ಸಮಯವಿಡಿಯುವುದಿಲ್ಲ.ಹೆಚ್ಚು ಟ್ರಾಫಿಕ್ ಸಮಸ್ಯೆ ಇರುವುದಿಲ್ಲ. ಉಪ್ಪುನೀರು ಅಶುದ್ದವಾದ ಆಹಾರವಿರುವುದಿಲ್ಲ.ಕಳಪೆ ಗುಣಮಟ್ಟದ ಆಹಾರ ಮತ್ತು ಆರೋಗ್ಯ, ಕಾಸ್ಟ್ಲಿ ಜೀವನ ಇದ್ಯಾವುದು ಇರುವುದಿಲ್ಲ. ಹೈದರಾಬಾದಿನಲ್ಲಿ ನಾನು ತುಂಬಾ ಶಾಂತವಾಗಿ, ಸಂತೋಷಕರವಾಗಿ, ಆರೋಗ್ಯವಾಗಿ ಜೀವಿಸುತ್ತಿದ್ದೇನೆ.
ಇತ್ತೀಚೆಗೆ ನಾನು ಸಾಮಾಜಿಕ ಜಾಲಾತಾಣವನ್ನು ಉಪಯೋಗಿಸುವುದನ್ನೇ ಮರೆತಿದ್ದೇನೆ ಎಂದರೆ ಅಷ್ಟರ ಮಟ್ಟಿಗೆ ಸಂತೋಷವಾಗಿದ್ದೇನೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಪೋಸ್ಟನ್ನು ನೋಡಿದ ಕನ್ನಡಿಗರು ಒಳ್ಳೆಯ ಕೆಲಸ ಮಾಡಿದೆ.ನೀವು ತುಂಬಾ ಒಳ್ಳೇಯ ನಿರ್ಧಾರವನ್ನು ತೆಗೆದುಕೊಂಡಿದ್ದೀರಾ ಎಂದು ವ್ಯಂಗ್ಯ ಮಾಡಿದರೆ, ನೀವು ಹೋದ ಹಾಗೆ ನಿಮ್ಮವರನ್ನೂ ಕೂಡಾ ಕರೆದುಕೊಂಡು ಹೋಗಿ ಎಂದೆಳುತ್ತಿದ್ದಾರೆ.ಮತ್ತೆ ಕೆಲವರು ನೀವು ಹೇಳಿದ ಹಾಗೆ ಏನು ಇಲ್ಲ ನಾವೆಲ್ಲರೂ ಎಷ್ಟು ವರ್ಷದಿಂದ ಇಲ್ಲೇ ಇದ್ದೇವೆ ಎಂದು ಹೇಳಿದ್ದಾರೆ.
