ನವೆಂಬರ್ 1 ರಂದು ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವನ್ನು ಅದ್ದೂರಿಯಾಗಿ ಅಚರಿಸುತ್ತಾರೆ.ಎಲ್ಲಾ ಚಿತ್ರಮಂದಿರಗಳಲ್ಲಿ ನ.01ರಿಂದ ನ 07ರವರೆಗೆ 1 ವಾರಗಳ ಕಾಲ ಕನ್ನಡ ಚಲನಚಿತ್ರಗಳನ್ನು ಎಲ್ಲಾ ಥಿಯೇಟರ್ಗಳಲ್ಲಿ ಪ್ರಸಾರ ಮಾಡಬೇಕೆಂದು ಬಳ್ಳಾರಿ ಅಪರ ಜಿಲ್ಲಾಧಿಕಾರಿಗಳಾದ ಮಹಮ್ಮದ್ ಎನ್.ಝಬೇರ್ರವರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಒಂದು ವಾರಗಳ ಕಾಲ ಕನ್ನಡ ಚಲನಚಿತ್ರಗಳನ್ನು ಪ್ರಸಾರ ಮಾಡದೇ ನಿಯಮವನ್ನು ಉಲ್ಲಂಘಿಸಿದರೆ ಥಿಯೇಟರ್ಗಳ ಪರವಾನಗಿಯನ್ನು ರಿನಿವಲ್ ಮಾಡುವುದಿಲ್ಲ. ಅಕ್ಟೋಬರ್ 31 ಮತ್ತು ನವೆಂಬರ್ 01ರಂದು ಚಿತ್ರಮಂದಿರಗಳನ್ನು ದೀಪಗಳಿಂದ ಅಲಂಕರಿಸಬೇಕೆಂದು ತಿಳಿಸಿದ್ದಾರೆ.
