ಧಾರವಾಡ: ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ, ಸಂಕ್ರಾಂತಿಯ ನಂತರ ರಾಜ್ಯ ರಾಜಕೀಯದಲ್ಲಿ ಕ್ರಾಂತಿಯಾಗುತ್ತದೆ ಎನ್ನುವ ವಿಚಾರದ ಕುರಿತು ವಸತಿ ಸಚಿವ ಜಮೀರ್ ಅಹ್ಮದ್ ವ್ಯಂಗ್ಯ ಮಾಡಿದ್ದಾರೆ.
ಈ ವಿಚಾರದ ಕುರಿತು ಮಾತನಾಡಿದ ಸಚಿವ ಜಮೀರ್ ಅಹ್ಮದ್ , ರಾಜ್ಯ ರಾಜಕೀಯದಲ್ಲಿ ಸಂಕ್ರಾಂತಿ ನಂತರ ಯಾವುದೇ ರೀತಿಯ ʼಕ್ರಾಂತಿಯೂ ಇಲ್ಲ ಬ್ರಾಂತಿಯೂ ಇಲ್ಲʼ ಎಂದು ವ್ಯಂಗ್ಯವಾಡುತ್ತಾ, ನವೆಂಬರ್ ನಂತರ ಬಿಜೆಪಿ ಪಕ್ಷದವರಿಗೆ ವಾಂತಿ ಬೇಧಿ ಶುರುವಾಗುತ್ತದೆ ಎಂದು ನಾನೇ ಖುದ್ದಾಗಿ ಹೇಳಿಕೆ ನೀಡಿದ್ದೆ. ಈದೀಗ ಬಿಜೆಪಿ ಪಕ್ಷದವರಿಗೆ ವಾಂತಿ-ಬೇಧಿ ಶುರುವಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿ ಪಾರ್ಟಿಯಲ್ಲಿ ಸಿಎಂ ಬದಲಾವಣೆಯನ್ನ ಮಾಡುವ ಪದ್ದತಿ ಹಿಂದಿನಿಂದಲೂ ಇದೆ. ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಇಲ್ಲಿವರೆಗೂ ಹೇಳಿಕೊಳ್ಳುವಂತಹ ರೀತಿಯ ಬಹುಮತಗಳು ಸಿಕ್ಕಿಲ್ಲ.ಅವರು ಮಾಡಿರುವ ಅಪರೇಷನ್ ಕಮಲದ ಮೂಲಕ ಅವರ ಗೌರ್ನಮೆಂಟ್ ರಚನೆಯಾಗಿದೆ ಎಂದು ಜಮೀರ್ ಅಹ್ಮದ್ ಖಾನ್ ಟೀಕಿಸಿದ್ದಾರೆ.
