ಕಲ್ಕತ್ತ: ಮಮತಾ ಬ್ಯಾನರ್ಜಿ ಅವರು ಮೊದಲಿನಿಂದಲೂ ‘ಬಂಗಾಳಿ ಅಸ್ಮಿತೆ’ಯನ್ನು ತಮ್ಮ ರಾಜಕೀಯದ ಪ್ರಮುಖ ಭಾಗವಾಗಿಸಿಕೊಂಡಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಂಗಾಳಿ ಭಾಷಿಕರನ್ನು ‘ಅಕ್ರಮ ನುಸುಳುಕೋರರು’ ಎಂದು ಟಾರ್ಗೆಟ್‌ ಮಾಡಲಾಗುತ್ತಿದೆ ಎಂಬುದು ಅವರ ವಾದವಾಗಿದೆ. ಈ ಹೇಳಿಕೆ ನೀಡುವುದರ ಮೂಲಕ ಅವರು ಪಶ್ಚಿಮ ಬಂಗಾಳದ ಮತದಾರರಲ್ಲಿ ಭಾವನಾತ್ಮಕ ಬೆಂಬಲವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಕಾಣಬಹುದಾಗಿದೆ.

ಬಿಜೆಪಿಯ ʼಒಂದು ರಾಷ್ಟ್ರ, ಒಂದು ಭಾಷೆʼ ಅಥವಾ ಹಿಂದಿ ಹೇರಿಕೆಯ ನಡೆಯನ್ನು ವಿರೋಧಿಸಲು ಮಮತಾ ಅವರು ಈ ಭಾಷಾ ಸಂಘರ್ಷವನ್ನು ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿನ ಘಟನೆಗಳನ್ನು ಪ್ರಸ್ತಾಪಿಸುವ ಮೂಲಕ, ಬಿಜೆಪಿಯು ವೈವಿಧ್ಯತೆಯನ್ನು ಗೌರವಿಸುವುದಿಲ್ಲ ಎಂಬ ಸಂದೇಶವನ್ನು ರವಾನಿಸುತ್ತಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕರು ಆಗಾಗ ಎನ್‌ಆರ್‌ಸಿ  ಜಾರಿಯ ಬಗ್ಗೆ ಮಾತನಾಡುತ್ತಿರುತ್ತಾರೆ. ʼಬಂಗಾಳಿ ಮಾತನಾಡಿದವರನ್ನೆಲ್ಲಾ ಬಾಂಗ್ಲಾದೇಶದವರು ಎಂದು ಬ್ರಾಂಡ್ ಮಾಡಲಾಗುತ್ತಿದೆʼ ಎಂದು ಹೇಳುವ ಮೂಲಕ, ಮಮತಾ ಅವರು ಅಲ್ಪಸಂಖ್ಯಾತರು ಮತ್ತು ಬಂಗಾಳಿ ಭಾಷಿಕ ಮತದಾರರನ್ನು ತನ್ನತ್ತ ಸೆಳೆಯುವ ತಂತ್ರ ರೂಪಿಸಿದ್ದಾರೆ.

Leave a Reply

Your email address will not be published. Required fields are marked *