ಬೆಂಗಳೂರು: ಇನ್ನೇನು 2025 ಮುಗಿದು ಹೊಸ ವರ್ಷ ಆಗಮನಕ್ಕೆ ಇನ್ನೇನು ಕೆಲವೇ ಗಂಟೆಗಳು ಉಳಿದಿವೆ.ಹೊಸ ವರ್ಷಾಚರಣೆಯ ಸಮಯದಲ್ಲಿ ಕುಡಿದವರೆಲ್ಲರನ್ನೂ ಕರೆದುಕೊಂಡು ಮನೆಗೆ ಬಿಡುವುದಿಲ್ಲ ಬದಲಾಗಿ ಡ್ರಿಂಕ್‌ ಆಂಡ್‌ ಡ್ರೈವ್‌ ಕೇಸ್‌ ಹಾಕಲಾಗುತ್ತದೆ ಎಂದು ಡಾ.ಜಿ.ಪರಮೇಶ್ವರ್‌ ಸ್ಪಷ್ಟನೆಯನ್ನು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಂತುಕೊಳ್ಳಲು ಆಗದ ಸ್ಥಿತಿಯಲ್ಲಿರುವವರನ್ನು, ತುಂಬಾ ಕುಡಿದವರನ್ನು ಮತ್ತು ನಡೆಯು ಆಗದವರನ್ನು ಮಾತ್ರ ವಿಶ್ರಾಂತಿಯ ಸ್ಥಳಕ್ಕೆ ಕರೆದುಕೊಂಡು ಬರುತ್ತೇವೆ. ಕೆಲವರು ಲಿಮಿಟ್‌ ಇಲ್ಲದೆ ಕುಡಿದಿರ್ತಾರೆ ಅವರಿಗೆ ಪ್ರಜ್ಞೆ ಇರುವುದಿಲ್ಲ ಅಂತಹ ವ್ಯಕ್ತಿಗಳನ್ನು ಇರಿಸಲು 15 ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಕುಡಿದಿರುವ ನಶೆ ಇಳಿಯುವವರೆಗೂ ಇಟ್ಟುಕೊಂಡು ನಂತರ ಕಳಿಸುತ್ತೇವೆ.

ಡ್ರಿಂಕ್‌ ಆಂಡ್‌ ಡ್ರೈವ್‌  ಮಾಡಿದರೆ ಕೇಸ್‌ ದಾಖಲಾಗುತ್ತದೆ. ಇನ್ನೂ ಹೆಚ್ಚು ಕುಡಿದು ಆಕ್ಸಿಡೆಂಟ್‌ ಆಗಿ ಜನಸಾಯ್ತಾರೆ ಮತ್ತು ಬೇರೆಯವರನ್ನೂ ಸಾಯಿಸುತ್ತಾರೆ ಇವೆರಡನ್ನೂ ಕಡಿಮೆ ಮಾಡಲು ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಬಾರ್‌ , ರೆಸ್ಟೋರೆಂಟ್‌ , ಪಬ್ಗಳಿಗೆ ಟೈಮಿಂಗ್ಸ್‌ ನಿಗದಿ ಮಾಡಿದ್ದು, ಆ ಟೈಮಿಂಗ್‌ ಪ್ರಕಾರವಾಗಿ ತೆರೆದಿರಬೇಕು .ಈ ನಿಯಮಗಳನ್ನು ಪಾಲಿಸದಿದ್ರೆ ಕೇಸ್‌ ಹಾಕಲಾಗುತ್ತದೆ ಎಂದಿದ್ದಾರೆ.

Leave a Reply

Your email address will not be published. Required fields are marked *