ತಮ್ಮ ತಾಯಿ ತೀರಿ ಹೋಗಿದ್ದಾರೆ ರಜೆ ನೀಡಿ ಎಂದು ಅಧಿಕಾರಿಗೆ ಹೇಳಿದಾಗ ಬ್ಯಾಂಕ್‌ ಅಧಿಕಾರಿಯ ಉತ್ತರ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದ್ದು, ಅಧಿಕಾರಿ ಹೇಳಿದ ಉತ್ತರ ಹೀಗಿದೆ, ʼಎಲ್ಲರ ತಾಯಿನೂ ಸಾಯ್ತಾರೆʼ ನಾಟಕ ಮಾಡಬೇಡಿ ಪ್ರಾಕ್ಟಿಕಲ್‌ ಆಗಿರಿ ಎಂದು ಅಮಾನವೀಯವಾಗಿ ವರ್ತಿಸಿರುವುದನ್ನು ಉದ್ಯೋಗಿಯು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ  ಸ್ರೀನ್‌ ಶಾಟ್‌ ಸಮೇತ ಹಂಚಿಕೊಂಡಿದ್ದು, ಅದೀಗ ವೈರಲ್‌ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಈ ಅಮಾನವೀಯ ಘಟನೆಯನ್ನು ನೋಡಿದ ನೆಟ್ಟಿಗರು ಅಮಾನವೀಯ ಘಟನೆ, ಈ ಅಮಾನವೀಯತೆಯನ್ನು ಕ್ಷಮಿಸಲು ಸಾದ್ಯವಿಲ್ಲ, ಅನಾಗರೀಕ ಸರ್ವಾಧಿಕಾರ, ಎಂದು ರಿಸರ್ವ್‌ ಬ್ಯಾಂಕ್‌ ಮತ್ತು ಹಣಕಾಸು , ಮತ್ತು ನಿಯಂತ್ರಕಗಳನ್ನು ಟ್ಯಾಗ್‌ ಮಾಡಿದ್ದಾರೆ.

Leave a Reply

Your email address will not be published. Required fields are marked *