ಹಾವೇರಿ: ಲಾರಿ ಚಾಲಕನ ನಿಯಂತ್ರಣ ತಪ್ಪಿರುವ ಕಾರಣ ಲಾರಿ ಡಿವೈಡರ್‌ಗೆ ಡಿಕ್ಕಿಯಾಗಿ ತುಂಡು ತುಂಡಾಗಿರುವ ಘಟನೆಯು ಹಾವೇರಿ ಬಳಿ ನಡೆದಿದೆ.

ಈ ಘಟನೆಯು ರಟ್ಟಿಹಳ್ಳೀ ತಾಲ್ಲೂಕಿನ ಹಳ್ಳೂರು ಗ್ರಾಮದ ಬಳಿಯಲ್ಲಿ ಕಬ್ಬಿಣ ತುಂಬಿದ ಲಾರಿಯು ರಭಸವಾಗಿ ಚಲಿಸುತ್ತಿದ್ದು, ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿ ಲಾರಿ 2 ಭಾಗಗಳಾಗಿ ಬಿದ್ದಿದೆ.ಒಂದು ಕಡೆ ಎಂಜಿನ್‌ ಬಿದ್ದಿದ್ದು, ಮತ್ತೊಂದು ಕಡೆ ಹಿಂಬಾಗ ಬಿದ್ದಿದ್ದು, ಲಾರಿ ಚಾಲಕ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.

ಲಾರಿಯು ಕಬ್ಬಿಣವನ್ನು ತುಂಬಿಕೊಂಡು ಹೊನ್ನಾಳಿ ಕಡೆಗೆ ಹೊರಟಿತ್ತು.ಅದೇ ವೇಳೆಯಲ್ಲಿ ಡಿವೈಡರ್‌ಗೆ ಡಿಕ್ಕಿಯಾಗಿದೆ, ಈ ಘಟನೆಯು ರಟ್ಟಿಹಳ್ಳಿ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *