ಮೊದಲಿಂದಲೂ ರಕ್ಷಿತಶೆಟ್ಟಿಯ ಭಾಷೆ ಎಲ್ಲರಿಗು ಕಿರಿ ಕಿರಿಯನ್ನು ಉಂಟುಮಾಡುತ್ತಿತ್ತು ,ಚಿಕ್ಕ ಹುಡುಗಿಯಾಗಿರುವ ಕಾರಣಕ್ಕೆ ಏನೋ ಎಲ್ಲರಿಗು ಸುಲಭವಾಗಿ ಗುರಿಯಾಗಿದ್ದಾಳೆ.ಅಶ್ವಿನಿ ,ಜಾನ್ವಿ ,ಸುದೀ,ಇವರೆಲ್ಲರ ಜೊತೆಯಲ್ಲಿ ಮಾತುಕತೆ ನಡೆದು ಜಗಳವಾದಾಗ ಧ್ರುವಂತ್ ಬೆಂಬಲವನ್ನು ವ್ಯಕ್ತಪಡಿಸಿ ಇದೀಗ ರಕ್ಷಿತ ವಿರುದ್ದ ಚಾಟಿ ಬೀಸಿದ್ದಾನೆ.

ರಕ್ಷಿತಾಳನ್ನು ಬೆಂಬಲಿಸಿದ ಧ್ರುವ್ ಅವಳ ಭಾಷೆಯ ಬಗ್ಗೆ ಅನುಮಾನಿಸಿರುವುದನ್ನು ನೋಡಿದರೆ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

ರಕ್ಷಿತಶೆಟ್ಟಿ ಹುಟ್ಟಿ ಬೆಳೆದದ್ದು ಮುಂಬೈನಲ್ಲಿ ಆದ್ದರಿಂದ ರಕ್ಷಿತಶೆಟ್ಟಿಗೆ ಆಷ್ಟಾಗಿ ಕನ್ನಡ ಮಾತನಾಡಲು ಬರುವುದಿಲ್ಲ.ಅರ್ಧ ಇಂಗ್ಲೀಷ್ ಅರ್ಧ ಕನ್ನಡ ಮಾತನಾಡಿನೇ ಎಲ್ಲಾರ ಗಮನ ಸೆಳೆದಿದ್ದಾಳೆ.

ಈ ರೀತಿ ಆಟವಾಡುತ್ತಿರುವ ರಕ್ಷಿತಾಳ ಮೇಲೆ ಧ್ರುವಂತ್ ಗೆ ಅನುಮಾನ ಮೂಡಿದೆ.ಇದೇ ವಿಚಾರವನ್ನು ಅಶ್ವಿನಿ ಗೌಡ ಮತ್ತು ಸುದೀ ಹತ್ತಿರ ಚರ್ಚೆ ಮಾಡಿದ್ದಾರೆ. ಇಷ್ಟು ದಿನ ಬೆಂಬಲಿಸುತ್ತಿದ್ದ ಧ್ರುವಂತ್ ಇದೀಗ ರಕ್ಷಿತ ಭಾಷೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವುದನ್ನು ನೋಡಿದರೆ ಅವರ ಮೇಲೆ ನೋಡುಗರಿಗೆ ಅನುಮಾನ ಮೂಡುತ್ತದೆ.

ರಕ್ಷಿತಾಗೆ ತುಳು ಮಾತನಾಡಲು ಸರಿಯಾಗಿ ಬರುವುದಿಲ್ಲ. ಕನ್ನಡ ಬರುತ್ತದೆ ಆದರೆ ಅವರು ಮಾತನಾಡಲ್ಲ. ಮಂಗಳೂರಿನವರು ಯಾರೂ ಈ ರೀತಿ ಮಾತನಾಡುವುದಿಲ್ಲ.ದು ಅಶ್ವಿನಿ ಮತ್ತು ಸುದಿಯ ಹತ್ತಿರ ಹೇಳುತ್ತಿದ್ದಂತೆ ಎಲ್ಲರೂ ಹು ಎನ್ನುವಂತೆ ತಲೆಯಾಡಿಸಿದ್ದಾರೆ.
