ಶಿವಮೊಗ್ಗ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂಬ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಕ್ ಮ್ಯಾನ್ ಚೆನ್ನಯ್ಯನಿಗೆ ಜಾಮೀನು ಮಂಜೂರಾಗಿತ್ತು, ಆದರೂ ಮಾಸ್ಕ್‌ಮ್ಯಾನ್ ಚೆನ್ನಯ್ಯನ ಬಿರುಗಡೆ ಮಾಡುವಂತಿಲ್ಲ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಕ್‌ಮ್ಯಾನ್ ಚೆನ್ನಯ್ಯನಿಗೆ ಮಂಗಳೂರಿನ ಜಿಲ್ಲಾ ನ್ಯಾಯಾಲಯವೂ ಬೇಲ್ ಸ್ಯಾಂಕ್ಷನ್ ಮಾಡಿತ್ತು.ಆದರೆ ಕೋರ್ಟ್ ಜಾಮೀನು ನೀಡಿದರೂ ಶ್ಯೂರಿಟಿ ನೀಡದ ಕಾರಣಕ್ಕಾಗಿ ಮಾಸ್ಕ್ ಮ್ಯಾನ್ ಬಿಡುಗಡೆಯಾಗುವುದು ಸಾದ್ಯವಿಲ್ಲ.
ಮಂಗಳೂರಿನ ಜಿಲ್ಲಾ ನ್ಯಾಯಾಲಯವು ಚೆನ್ನಯ್ಯನಿಗೆ ಜಾಮೀನು ನೀಡುವ ವೇಳೆ ಒಂದು ಲಕ್ಷ ರೂಪಾಯಿಯ ಬಾಂಡ್ ಮತ್ತು ಇಬ್ಬರು ಶ್ಯೂರೂಟಿ ನೀಡಬೇಕೆಂದು 12 ಶರತ್ತುಗಳನ್ನು ನೀಡಿತ್ತು. ಈದೇ ಕಾರಣದಿಂದ ಶ್ಯೂರಿಟಿ ನೀಡಲು ಯಾರು ಬರದಿದ್ದ ಕಾರಣ ಜೈಲಿನಲ್ಲಿಯೇ ವಾಸ ಮಾಡಬೇಕಾಗಿದೆ ಎನ್ನಲಾಗಿದೆ.
