ಮಂಗಳೂರು: ಧರ್ಮಸ್ಥಳದ ಬಗ್ಗೆ ಆರೋಪ ಮಾಡಿರುವ ಬುರುಡೆ ಗ್ಯಾಂಗ್ ವಿರುದ್ದ ಮಾಸ್ಕ್‌ಮ್ಯಾನ್ ಚಿನ್ನಯ್ಯ ದೂರು ನೀಡಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಕಾರಾಗೃಹದಿಂದ ಬಿಡುಗಡೆಯಾದ ಮಾಸ್ಕ್‌ಮ್ಯಾನ್ ಚಿನ್ನಯ್ಯ ಬರುಡೆ ಗ್ಯಾಂಗ್ ವಿರುದ್ದ ದೂರು ನೀಡಿದ್ದಾರೆ.

ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತು ಹಾಕಿರುವ ಪ್ರಕರಣದಲ್ಲಿ ಮಹೇಶ್ ತಿಮರೋಡಿ, ವಿಠಲಗೌಡ, ಗಿರೀಶ್ ಮಟ್ಟಣ್ಣನವರ್ ಸಮೀರ್ ಎಂ.ಡಿ ಇವರೆಲ್ಲಾ ಬುರುಡೆ ಗ್ಯಾಂಗ್ನಲ್ಲಿದ್ದರು. ಇದೀಗ ಇವರ ವಿರುದ್ದವೇ ನನ್ನ ಕುಟುಂಬಕ್ಕೆ ಇವರುಗಳಿಂದ ಜೀವ ಬೆದರಿಕೆ ಬರಬಹುದೆಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
