ಬೆಂಗಳೂರು:ರಾಜ್ಯದಲ್ಲಿ ಸಿಎಂ ಯಾರು? ಡಿಸಿಎಂ ಯಾರು? ಎಂಬುದನ್ನು ಕಾಂಗ್ರೆಸ್‌ ನಾಯಕರು ಸ್ಪಷ್ಟಪಡಿಸಲಿ ಎಂದು ಜೆಡಿಎಸ್‌  ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕೀಯದಲ್ಲಿ ಸಿಎಂ ಕುರ್ಚಿ ಕದನ ತುಂಬಾ ಜೋರಾಗಿಯೇ ನಡೆಯುತ್ತಿದೆ. ಒಂದು ಬಾರಿ ಸಿಎಂ ಮತ್ತೊಂದು ಬಾರಿ ಡಿಸಿಎಂ ಬ್ರೇಕ್‌ ಪಾಸ್ಟ್‌ ಮೀಟಿಂಗ್‌ಗಳನ್ನು ನಡೆಸುತ್ತಲೇ ಇದ್ದಾರೆ. ಇವರು ನಾಟಿ ಕೋಳಿಯನ್ನು ತಿಂದಿದ್ದಾರೆ ಎಂದು ಸೋಷಿಯಲ್‌ ಮೀಡಿಯಾಗಳಲ್ಲಿ ನೋಡಿದೆ ಎಂದು ಹೇಳಿದ್ದಾರೆ.

ನಮ್ಮ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಯಾರು? ಉಪಮುಖ್ಯಮಂತ್ರಿಯಾರು ಎಂದು ರಾಜ್ಯದ ಜನತೆ ಗೊಂದಲದಲ್ಲಿದ್ದಾರೆ.ಈ ಗೊಂದಗಳಿಗೆ ಗಮನವರಿಸಿದ ನಾಯಕರ ನಡೆಯಿಂದ ರಾಜ್ಯದ ಅಭಿವೃದ್ದಿಯು ಕುಂಠಿತವಾಗಿದೆ.ಅದರಂತೆ ಹೈಕಮಾಂಡ್‌ ಕೂಡಾ ಸಮರ್ಥವಾಗಿ ನಡೆದುಕೊಳ್ಳುತ್ತಿಲ್ಲ.ಇದೆಲ್ಲಾ ಕಾರಣಗಳಿಂದ ರಾಜ್ಯದ ಹಣವೆಲ್ಲಾ ಪೋಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಎಐಸಿಸಿ ಅಧ್ಯಕ್ಷರೇ ಸುಪ್ರೀಂ ಆಗಿದ್ದಾರೆ, ಸಿಎಂ , ಡಿಸಿಎಂ ಗೊಂದಲಗಳಿಗೆ ಚರ್ಚಿಸಿ ಪರಿಹಾರ ನೀಡುತ್ತೇವೆ ಎಂದು ಯಾಕೆ ಹೇಳ್ತಿದ್ದಾರೆಂಬುದು  ತಿಳಿಯುತ್ತಿಲ್ಲವೆಂದು ಟೀಕಿಸಿದ್ದಾರೆ.

Leave a Reply

Your email address will not be published. Required fields are marked *