ಬಿಗ್‌ಬಾಸ್ ಶೋ ಪ್ರಾರಂಭವಾದಾಗಿನಿಂದ ಗಿಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಚರ್ಚೆಯಲ್ಲಿ ಉಳಿದಿದ್ದಾರೆ.ವಿಭಿನ್ನ ಶೈಲಿಯಲ್ಲಿ ಹಾಸ್ಯ ಮಾಡುತ್ತಾ ಮನೆಯಲ್ಲಿರುವ ಅಭ್ಯರ್ಥಿಗಳನ್ನು ಮತ್ತು ಪ್ರೇಕ್ಷಕರನ್ನು ರಂಜಿಸಿ ಅವನ ಆಟಕ್ಕೆ ಮನಸೋಲುವಂತೆ ಮಾಡಿದ್ದು, ಗಿಲ್ಲಿ ಮಾತಾಡೊ ಮಾತುಗಳು, ಹಾಡುಗಳು ಸಾಮಾಜಿಕ ಜಾಲಾತಾಣಗಳಲ್ಲಿ ಟ್ರೆಂಡಿಂಗ್ ಹುಟ್ಟುಹಾಕಿದ್ದು, ವೈರಲ್ ಆಗಿ ಹೆಚ್ಚು ವೀಕ್ಷಣೆಯನ್ನು ಪಡೆದುಕೊಳ್ಳುತ್ತಿದೆ.

ಗಿಲ್ಲಿ ಮಾಡುವ ಚೇಸ್ಟೇ ಮಾತು ಎಲ್ಲವೂ ಟ್ರೆಂಡಿಂಗ್ ಆಗುತ್ತಿದೆ. ಗಿಲ್ಲಿ ಅಭಿಮಾನಿಗಳು ಡಮಾಲ್ ಡಿಮಿಲ್ ಡಕ್ಕಾ ಗಿಲ್ಲಿ ಈ ಸಲ ಗೆಲ್ಲೋದು ಪಕ್ಕಾ ಎಂದು ಅಭಿಯಾನವನ್ನು ಶುರು ಮಾಡಿದ್ದಾರೆ ಎನ್ನಲಾಗಿದೆ.

ಗಿಲ್ಲಿ ಹಾಡನ್ನು ರುದ್ರಿ ರಿಷಿಕಾ ಮತ್ತು ಶಶಿ ಮ್ಯೂಸಿಕ್ ಕಂಪೋಸ್ ಮಾಡುವುದರ ಜೊತೆಗೆ ಸಾಹಿತ್ಯವನ್ನು ಬರೆದಿದ್ದು, ಕಂಟೇಂಟ್ ಮತ್ತು ಎಡಿಟಿಂಗ್‌ನ್ನು ರವಿ ಎಬಿ ಎಂಬುವವರು ಮಾಡಿದ್ದು, R2 ಮ್ಯೂಸಿಕ್ ಯ್ಯೂಟೂಬ್ ಚಾನೆಲ್ಲಿನಲ್ಲಿ ಹಾಡು ಬಿಡುಗಡೆ ಮಾಡಲಾಗಿದ್ದು, ಹೆಚ್ಚು ಮನರಂಜನೆನ್ನು ನೀಡುತ್ತಿದೆ. A1ಬಳಸಿ ಮಾಡಿರುವುದರಿಂದ ವಿಭಿನ್ನವಾಗಿ ಮೂಡಿಬಂದಿದೆ.
ಒಟ್ಟಾರೆ ಗಿಲ್ಲಿ ತನ್ನ ಶೈಲಿಯಲ್ಲಿ ಆಟಗಳನ್ನಾಡಿ ಜನರನ್ನು ರಂಜಿಸಿದ್ದಾರೆ. ಹೊಸದಾಗಿ ರಿಲೀಸ್ ಆಗಿರುವ ಹಾಡಿಗೆ ಸಿನಿಮಾ ನಟರಿಂದ ಹಿಡಿದು, ಪ್ರೇಕ್ಷಕರು, ಅಭಿಮಾನಿಗಳು ಈ ಹಾಡಿಗೆ ಮನಸೋತಿದ್ದಾರೆ.
