ಕಲರ್ಸ್‌ ಕನ್ನಡದಲ್ಲಿ ಪ್ರಾರಂಭವಾಗಿರುವ ಬಿಗ್‌ಬಾಸ್‌ ಸೀಜನ್‌ 12ರಲ್ಲಿ ಹಲವು ಟ್ವಿಸ್ಟ್‌ ಆಂಡ್‌ ಅಂಡ್‌ ಟರ್ನ್‌ಗಳು ನಡೆದಿವೆ. ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಈ ರಿಯಾಲಿಟಿ ಶೋ ಎಲ್ಲರ ಮನೆಮಾತಾಗಿದೆ.

ಈ ವಾರ ಬಿಗ್‌ಬಾಸ್‌ ಸ್ಪರ್ಧಿಗಳ ಮನೆಯಿಂದ ಪತ್ರಗಳು ಬಂದಿದ್ದವು. ಆ ಪತ್ರಗಳನ್ನು ಪಡೆಯಲು ಟಾಸ್ಕ್‌ ನೀಡಲಾಗಿತ್ತು. ಪತ್ರಗಳನ್ನು ಓದಲು ಟಾಸ್ಕನ್ನು ಕಂಪ್ಲೀಟ್‌ ಮಾಡಬೇಕಾಗಿತ್ತು. ಟಾಸ್ಕಿನಲ್ಲಿ ಗೆದ್ದವರು ಪತ್ರವನ್ನು ಓದಿದರೆ ಸೋತವರು ಪತ್ರವನ್ನು ಕಳೆದುಕೊಳ್ಳಬೇಕಾಯಿತು.

ಹೀಗಿರುವಾಗ ಗಿಲ್ಲಿನಟ ಮತ್ತು ಕಾವ್ಯ ನಡುವೆಯೂ ಇದೇ ರೀತಿಯಾಗಿದ್ದು,ಇವರಿಬ್ಬರಲ್ಲಿ ಯಾರಾದರೊಬ್ಬರು ಮಾತ್ರ ಪತ್ರವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ ಒಂದು ನಿಮಿಷ ಕಾಲಾವಕಾಶ ಪಡೆದುಕೊಂಡು ಯೋಚಿಸಿ ಹೇಳಿ ಎಂದು ಬಿಗ್‌ಬಾಸ್‌ ಹೇಳಿದಾಗ  ಗಿಲ್ಲಿ ಕಾವ್ಯಗೋಸ್ಕರ ತ್ಯಾಗವನ್ನು ಮಾಡಿದ್ದಾರೆ.

ನಿಮ್ಮ ನಿರ್ಧಾರವನ್ನು ತಿಳಿಸಿ ಎಂದು ಬಿಗ್‌ಬಾಸ್‌ ಕೇಳಿದಾಗ ಗಿಲ್ಲಿ ನಾನು ಪತ್ರವನ್ನು ತೆಗೆದುಕೊಂಡು ಬರುತ್ತೇನೆ ಎಂದು ಹೇಳಿದ್ದಾರೆ.ಅದೇ ರೀತಿ ಕಾವ್ಯ ನಾನು ಪತ್ರವನ್ನು ತರುವುದಿಲ್ಲವೆಂದು ಹೇಳಿದ್ದಾರೆ.

ಗಿಲ್ಲಿ ಹೇಳಿದ ಹಾಗೆ ಕಾವ್ಯ ಮನೆಯಿಂದ ಬಂದ ಪತ್ರವನ್ನು ಕಾವ್ಯಗೆ ನೀಡಿದಾಗ ಕಾವ್ಯ ಭಾವುಕರಾಗಿ ಪ್ರೀತಿಯ ಅಪ್ಪುಗೆಯನ್ನುನೀಡಿದ್ದಾರೆ. ಗಿಲ್ಲಿ ತ್ಯಾಗದಿಂದ ಕಾವ್ಯ ಬಚಾವ್‌ ಆಗಿ, ಗಿಲ್ಲಿ ನಾಮಿನೇಷನ್‌ ಆಗಿದ್ದಾರೆ. ಈ ವಾರ ಪ್ರೇಕ್ಷಕರ ಮೂಲಕ ವೋಟ್‌ ಮಾಡಿಸಲಾಗಿದೆ.ಯಾವ ಸ್ಪರ್ಧಿಗೆ ಹೆಚ್ಚು ಮತ ಸಿಗುತ್ತದೆಯೋ ಅವರು ಕ್ಯಾಪ್ಟನ್‌ ಪಟ್ಟವನ್ನು ಏರಲಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ-ಕಾವ್ಯ ಜೋಡಿ ಮೋಡಿ ಮಾಡಿದೆ.ಪ್ರತಿಯೊಂದರಲ್ಲೂ ಒಬ್ಬರನೊಬ್ಬರು ಬಿಟ್ಟುಕೊಡದೆ ಆಟವಾಡುತ್ತಿದ್ದಾರೆ.ಗಿಲ್ಲಿಯಿಂದಲೇ ಕಾವ್ಯ ಇಲ್ಲಿಯವರೆಗೂ ಉಳಿದುಕೊಂಡಿರುವುದು.ಕಾವ್ಯಗೊಸ್ಕರ ತ್ಯಾಗ ಮಾಡ್ತಾನೆ ಗಿಲ್ಲಿ ಎಂದು ಮನೆಯಲ್ಲಿ ಚರ್ಚೆಗಳು ನಡೆಯುತ್ತಿವೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಆಟವಾಡುತ್ತಿದ್ದಾರೆ ಈ ಜೋಡಿಗಳು.

Leave a Reply

Your email address will not be published. Required fields are marked *