ಬಿಗ್‌ಬಾಸ್‌ ಪ್ರಾರಂಭವಾದ ದಿನದಿಂದಲೂ ಒಬ್ರ ಜೊತೆ ಮತೊಬ್ರು ಕಾರಣಾಂತರಗಳಿಂದ ಜಗಳವಾಡುತ್ತಲೇ ಇದ್ದಾರೆ. ಬೇರೆ ಸಮಯದಲ್ಲಿ ಚೆನ್ನಾಗಿದ್ದವರೂ ನಾಮಿನೇಷನ್‌ ಸಮಯದಲ್ಲಿ ಬಿರುಕುಗಳು ಉಂಟಾಗುತ್ತವೆ. ಹಾಗೆಯೇ ಇದೀಗ ಗಿಲ್ಲಿ ನಟ ಮತು ರಿಷಾಗೌಡ ನಡುವೆ ಮಾತಿನ ಚಕಮಕಿ ನಡೆದಿದೆ.

ಕಾವ್ಯ ಒಂದು ಸಲ ಜಗಳವಾಡಿದರೆ ಮತೆ ಮಾತನಾಡುವುದಿಲ್ಲ ಎಂದು ಗಿಲಗಲಿ ಚಂದ್ರಪ್ರಭನಿಗೆ ವರದಿ ಒಪ್ಪಿಸುತಿದ್ದರೆ ಈ ಕಡೆ ಕಾವ್ಯ ಗಿಲ್ಲಿ ಮಾತುಗಳನ್ನು ಕೇಳಿ ನಗುತಿದ್ದಳು.

ಗಿಲ್ಲಿ ಚಂದ್ರಪ್ರಭ ಮಾತನಾಡುತಿದ್ದರೆ ಇತ್ತ ರಿಷಾಗೌಡ ಗಿಲ್ಲಿ ನೀನು ಕಾವ್ಯಗೆ ಬಕೆಟ್‌ ಹಿಡಿಯುತೀದ್ದಿಯಾ ಎಂದು ಕಾಲು ಎಳೆಯುತ್ತಿದ್ದಳು.ಈ ಮಾತನ್ನು ಕೇಳಿದ ಗಿಲ್ಲಿ ರಿಷಾಗೌಡಾಗೆ ನಾನು ಕಾವ್ಯಗೆ ಬಕೆಟ್‌ ಹಿಡಿದರೆ, ನೀನು೮ ಮನೆಯವರೆಲ್ಲರಿಗೂ ಬಕೆಟ್‌ ಹಿಡಿಯುತೀದ್ದಿಯಾ ಎಂದು ಟಾಂಗ್‌ ಕೊಟ್ಟಿದ್ದಾನೆ.

ಗಿಲ್ಲಿ ಮಾತಿಗೆ ಕೆರಳಿದ ರಿಷಾ ಗಿಲ್ಲಿ ನಿನ್ನತ್ರ ನಾನು ಅನ್ನಿಸಿಕೊಳ್ಳಲು ಬಿಗ್‌ಬಾಸ್‌ ಮನೆಗೆ ಬಂದಿಲ್ಲ.ಇಲ್ಲಿಗೆ ಬಂದಾಗಿನಿಂದ ನೋಡುತಿದ್ದೇನೆ ಯಾವಾಗ್ಲೂ ಕಾವ್ಯ, ಕಾವ್ಯಾ ಎಂದು ಅವಳಿಂದೆನೇ ಇರ್ತಿಯಾ ಎಂದು ಜೋರುದ್ವನಿಯಲ್ಲಿ ಕಿರುಚಿದ್ದಾಳೆ.ನನ್ನ ಕಾಲು ಎಳೆಯೋಕ್‌ ಬರ್ಬೆಡಾ.ನೀನು ಫ್ರೀ ಪ್ರಾಡಕ್ಟ್‌ ಎಂದು ಗಿಲ್ಲಿಗೆ ಹೇಳಿದ್ದಾಳೆ ಈ ಮಾತನ್ನು ಕೇಳಿ ಕೆರಳಿದ ಗಿಲ್ಲಿ ನೀನು ಬಕೆಟ್‌ ಅಲ್ಲ ದೊಡ್ಡ ಡ್ರಮ್‌ ಎಂದು ಕೂಗಿ ಹೇಳಿದ್ದಾನೆ.

Leave a Reply

Your email address will not be published. Required fields are marked *