ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಕ್ಕೆ ಹಕ್ಕಿಯು ಡಿಕ್ಕಿ ಹೊಡೆದಿರುವ ಘಟನೆ ನಡೆದಿರುವುದು ತಿಳಿದುಬಂದಿದೆ.

ವಿಜಯವಾಡದಿಂದ ಹೊರಡಲು ತಯಾರಾದ A19841 ವಿಮಾನವೊಂದಕ್ಕೆ ಆಕಾಶದಲ್ಲಿ ಹಾರಾಡುತ್ತಿರುವ ಹದ್ದು ಡಿಕ್ಕಿ ಹೊಡೆದಿರುವ ಕಾರಣ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಯಿತು.

ಹಕ್ಕಿಯು ವಿಮಾನದ ಮುಖಕ್ಕೆ ಡಿಕ್ಕಿ ಹೊಡೆದಿರುವ ಪರಿಣಾಮ ತಕ್ಕನ ವಿಮಾನದ ಹಾರಾಟವನ್ನು ನಿಲ್ಲಿಸಿ, ವಿಮಾನದಲ್ಲಿರುವ 90 ಜನಪ್ರಯಾಣಿಕರನ್ನು ಸುರಕ್ಷಿತವಾದ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.ಇಂದು ಬೆಳಗ್ಗೆ 8.15ಕ್ಕೆ ಹೊರಟ ವಿಮಾನ ಬೆಳಗ್ಗೆ 9.40ಕ್ಕೆ ಬೆಂಗಳೂರು ಏರ್‌ ಪೋರ್ಟ್ಗೆ ಬರಬೇಕಾಗಿತ್ತು.ವಿಮಾನಕ್ಕೆ ಹಕ್ಕಿ ಡಿಕ್ಕಿಯಾದ ಕಾರಣ ವಿಮಾನ ಪ್ರಯಾಣ ರದ್ದು ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Leave a Reply

Your email address will not be published. Required fields are marked *