ಕಾಬುಲ್: ಆಫ್ಘಾನಿಸ್ತಾನದಲ್ಲಿ ಭೀಕರ ಭೂಕಂಪ ಸಂಭವಿಸಿದ್ದು, 600ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಆಗ್ನೇಯ ಆಫ್ಘಾನಿಸ್ತಾನದಲ್ಲಿ ರಾತ್ರಿ ಸುಮಾರು 11.47 ಕ್ಕೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.0 ದಾಖಲಾಗಿದೆ. ಈ ಅವಘಡದಲ್ಲಿ ಕಟ್ಟಡಗಳು, ಮನೆಗಳು ಮತ್ತು ಅವಷೇಶಗಳಡಿ ಸಿಲುಕಿ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಇತ್ತೀಚಿಗಿನ ಮಾಹಿತಿ ಪ್ರಕಾರ 622 ಜನರು ಸಾವನ್ನಪ್ಪಿದ್ದಾರೆ.500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ಘಟನೆಯಿಂದಾಗಿ ಕುನಾರ್ ಪ್ರಾಂತ್ಯದ 3 ಹಳ್ಳಿಗಳು ನೆಲಸಮವಾಗಿವೆ . ಭೂಕಂಪದಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗಲಿದೆ ಎನ್ನಲಾಗಿದೆ.
