ಬೆಂಗಳೂರು: ಬಿಎಂಟಿಸಿ ಬಸ್ಗೆ ಸಿಕ್ಕಿ ಮತ್ತೊಬ್ಬ ಬಾಲಕಿ ಸಾವನಪ್ಪಿರುವ ಘಟನೆ ಯಲಹಂಕ ಕೋಗಿಲು ಕ್ರಾಸ್ ಬಳಿ ನಡೆದಿರುವುದು ತಿಳಿದುಬಂದಿದೆ.
ಮೃತ ಬಾಲಕಿ ತನ್ವಿ ಎಂದು ತಿಳಿದುಬಂದಿದ್ದು ಈ ಬಾಲಕಿಯು 5ನೇ ತರಗತಿಯಲ್ಲಿ ಓದುತ್ತಿದ್ದಳು.ತಾಯಿ ಹರ್ಷಿತಾ ತಮ್ಮ ಮಗಳನ್ನು ಶಾಲೆಗೆ ಡ್ರಾಪ್ ಮಾಡಲು ಹೋದಾಗ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಆಕ್ಟಿವ್ ಹೊಂಡಾದಲ್ಲಿ ಶಾಲೆಗೆ ಡ್ರಾಪ್ ಮಾಡಲು ಹೋಗುವ ವೇಳೆ ಯಲಹಂಕ ಬಳಿಯ ಕೋಗಿಲು ಕ್ರಾಸಿನ ಪೆಟ್ರೋಲ್ ಬಂಕ್ ಹತ್ತಿರ ಗಾಡಿ ಸ್ಕಿಡ್ ಆಗಿದ್ದು, ಸ್ಕೂಟರಿನ ಹಿಂಬದಿಯಿದ್ದ ಮಗು ಚಲಿಸುತ್ತಿದ್ದ ಬಸ್ ಚಕ್ರದ ಕೆಳಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
